ಭಾರತ ರತ್ನ:ಬಿ. ಆರ್. ಅಂಬೇಡ್ಕರ್

*ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್*
ಅಂಬೇಡ್ಕರ್ ಜನನ*
ಡಾ ಬಿ. ಆರ್ ಅಂಬೇಡ್ಕರ್ ರವರು 14ನೇ ಏಪ್ರಿಲ್, 1891 ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ ನಲ್ಲಿ ಹುಟ್ಟಿದರು. ಅಂಬೇಡ್ಕರ್ ರವರು ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲ್ಲೂಕಿನ ಅಂಬೆವಾಡ ಗ್ರಾಮದವರು. ಇವರು ಮಹಾರ‍ ಜಾತಿಯಲ್ಲಿ ಹುಟ್ಟಿದರು. ಈ ಜಾತಿಯವರು ಹೆಚ್ಚಿನ ಜನ ಬ್ರಿಟಿಷ್ ಸರ್ಕಾರದ ಮಿಲಿಟರಿ ಸೇವೆಯಲ್ಲಿ ಉದ್ಯೋಗಕ್ಕಾಗಿ ಸೇರುತ್ತಿದ್ದರು.
ಇವರ ತಂದೆ ಹಾಗೂ ಆರು ಜನ ಚಿಕ್ಕಪ್ಪಂದಿರು, ಸೈನ್ಯದಲ್ಲಿ ಸುಬೇದಾರರಾಗಿದ್ದರು.ರಾಮಜಿ ಮತ್ತು ಭೀಮಬಾಯಿ ರವರು ಇಬ್ಬರು ಕಷ್ಟ ಸಹಿಷ್ಣುಗಳಾದ ಸತಿಪತಿಗಳಾಗಿದ್ದರು. ಇವರಿಗೆ 14 ಮಕ್ಕಳು ಹುಟ್ಟಿದರು. ಈ 14ನೇ ಮಗುವೇ ಅಂಬೇಡ್ಕರ್. ಅಂಬೇಡ್ಕರ್ ಅವರ ಮೊದಲ ಹೆಸರು ಭೀಮರಾವ್ ಆಗಿತ್ತು. ಡಾ. ಅಂಬೇಡ್ಕರರು ನಾನು ನನ್ನ ತಂದೆ ತಾಯಿಯರಿಗೆ 14 ನೇ ರತ್ನನಾಗಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.
ರಾಮಜಿ ಸಕ್ಪಾಲ್ ರವರಿಗೆ 14 ಮಕ್ಕಳಲ್ಲಿ ಬದುಕುಳಿದ್ದಿದ್ದು 5 ಜನ ಮಕ್ಕಳು, ಅವರು ಮಂಜುಳಾ, ತುಳಸಿ, ಬಲರಾಮ, ಆನಂದರಾವ್ ಮತ್ತು ಭೀಮರಾವ್. ಭೀಮರಾವ್ 2 ವರ್ಷದ ಬಾಲಕನಿದ್ದಾಗ ತಂದೆ ನೌಕರಿಯಿಂದ ನಿವೃತ್ತಿ ಹೊಂದಿದರು. ಇವರು 14 ವರ್ಷಗಳವರೆಗೆ ಮಿಲಿಟರಿ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸಿದ್ದರು. ಇವರು ಮರಾಠಿ, ಹಿಂದಿ ಭಾಷೆಯಲ್ಲಿ ಪ್ರಬುದ್ಧ ಜ್ಞಾನ ಹೊಂದಿದ್ದರು.
ಪ್ರಾಥಮಿಕ ಶಿಕ್ಷಣ ಹಲವಾರು ನೋವು ಮತ್ತು ಅವಮಾನಗಳಿಂದ ಸಾತಾರದಲ್ಲಿ ಮುಗಿಸಿ, ಮಾಧ್ಯಮಿಕ ಶಿಕ್ಷಣಕ್ಕಾಗಿ ಬಾಂಬೆಯ ಸರಕಾರಿ ಪ್ರೌಢ ಶಾಲೆಯಾದ ಎಲಿಫಿನ್ ಸ್ಟನ್ ಹೈಸ್ಕೂಲಿಗೆ ಸೇರಲು ನಿರ್ಧರಿಸುತ್ತಾರೆ. ಸಾತರದಂತೆ, ಇವರಿಗೆ ಹೆಚ್ಚು ಶೋಷಣೆ ಅನ್ಯಾಯ ಚುಚ್ಚು ಮಾತು ಅಪಮರ್ಯಾದೆ ಇರಕ್ಕಿಲ್ಲ ಎಂಬ ಭಾವನೆಯೊಂದಿಗೆ ಬಾಂಬೆಗೆ ಹೋಗಿ ಕಾರ್ಮಿಕರ ಬಡಾವಣೆ ಪರೇಲ ಎಂಬಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ಹಿಡಿದು ಶಾಲೆಗೆ ಸೇರಿಸುತ್ತಾರೆ.
ಸರಕಾರಿ ಶಾಲೆಯ ನಿವೃತ್ತ ಶಿಕ್ಷಕರಾದ ಕೆ ಎ ಕೆಲಸ್ಕರ್ ರವರು ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಾರೆ. ಕೆ ಎ ಕೆಲಸ್ಕರ್ ರವರು ಅಂಬೇಡ್ಕರ್ ರವರನ್ನು ತುಂಬು ಹೃದಯದಿಂದ ಅಭಿನಂದಿಸಿ, ನೀವು ನಿಮ್ಮ ಸಮಾಜದ ಮತ್ತು ಭಾರತದ ಸುಧಾರಕರಾಗಬೇಕೆಂದು ಹರಸುತ್ತಾರೆ. ಮತ್ತು ಉನ್ನತ ವ್ಯಾಸಂಗಕ್ಕೆ ತಮ್ಮ ಕೈಲಾದ ಸಹಾಯ ಮಾಡುವೆವೆಂದು ಪ್ರೋತ್ಸಾಹಿಸುತ್ತಾರೆ. ತಾವೇ ಬರೆದ ಭಗವಾನ್ ಬುದ್ಧನ ಚರಿತ್ರೆಯ ಪುಸ್ತಕವನ್ನು ಭೀಮರಾವರವರಿಗೆ ಕಾಣಿಕೆ ನೀಡುತ್ತಾರೆ. ಡಾ.ಅಂಬೇಡ್ಕರ್ ರವರು ಬೌದ್ಧ ಧರ್ಮಕ್ಕೆ ಒಲಿಯಲು ಈ ಪುಸ್ತಕವೇ ಪ್ರೋತ್ಸಾಹ ಕೊಡುತ್ತದೆ.
13ಅಕ್ಟೋಬರ್  1935 ರಲ್ಲಿ ಯೋಲ ನಾಸಿಕ್ನಲ್ಲಿ ರಾಲಿಯಲ್ಲಿ ಉದ್ದೇಶಿಸಿ ಭಾಷಣ ಮಾಡುತ್ತಿರುವ ಡಾ.ಬಾಬಾ ಸಾಹೇಬ್ಅಂಬೇಡ್ಕರ್.
ಸಂವಿಧಾನ ರಚನಾಸಭೆ, 1950ರಲ್ಲಿ.
ಅಸ್ಪೃಶ್ಯತೆಯ ವಿರುದ್ದ ಹೋರಾಟ,
೧೯೩೨ರವರೆಗೆ, ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕೆರೆ, ಬಾವಿಗಳಿಂದ ನೀರು ಸೇದುವ ಹಕ್ಕು ಇತ್ಯಾದಿಗಳಿಗಾಗಿ ಹೋರಾಡಿದರು. ಇವುಗಳಲ್ಲಿ ನಾಸಿಕದಲ್ಲಿಯ ಕಾಳ ರಾಮನ ದೇವಸ್ಥಾನ ಮತ್ತು ಮಹಾಡದ ಚೌಡಾರ್ ಕೆರೆಯ ವಿಷಯವಾಗಿ ಅಸ್ಪೃಶ್ಯರನ್ನು ಹೊರಗಿಟ್ಟಿರುವರ ವಿರುದ್ಧ ಮಾಡಿದ ಆಂದೋಲನಗಳು ಗಮನಾರ್ಹವಾಗಿವೆ.
ಸಹಸ್ರಾರು ಅಸ್ಪೃಶ್ಯ ಸತ್ಯಾಗ್ರಹಿಗಳು ಭಾಗವಹಿಸಿದ ಈ ಅಹಿಂಸಾತ್ಮಕ ಚಳುವಳಿಗಳಿಗೆ ಸವರ್ಣೀಯರು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದರು. ನ್ಯಾಯಾಲಯದ ಕಟ್ಟೆ ಹತ್ತಿದ ಚೌಡಾರ್ ಕೆರೆಯ ಚಳುವಳಿಯು, ಅನೇಕ ವರ್ಷಗಳ ನಂತರ, ಕೆಳವರ್ಗಗಳ ಪರವಾಗಿ ವಿಜಯ ಸಾಧಿಸು ವುದರೊಂದಿಗೆ ಪರ್ಯವಸಾನ ಹೊಂದಿತು. ಅಸ್ಪೃಶ್ಯರನ್ನು ಸಮಾಜ ನಡೆಸಿಕೊಳ್ಳುತ್ತಿದ್ದ ಕ್ರೂರ ರೀತಿಗೆ ಮೂಲ ಕಾರಣ 'ಮನುಸ್ಮೃತಿ' ಎಂದು ಅಂಬೇಡ್ಕರ್ ನಂಬಿದ್ದರು.
ಮನುಸ್ಮೃತಿಯನ್ನು ಇದೇ ಚಳುವಳಿಯಲ್ಲಿ ವಿಧ್ಯುಕ್ತವಾಗಿ ದಹನ ಮಾಡಲಾಯಿತು. ಈ ಕೃತಿಯನ್ನು ಹೀಗೆ ಸಾರ್ವಜನಿಕವಾಗಿ ಅವಮರ್ಯಾದೆ ಮಾಡುವುದರ ಮೂಲಕ ಅಂಬೇಡ್ಕರರ ಅನುಯಾಯಿಗಳು ಸಮಾನತೆಯ ಹಕ್ಕು ಪ್ರತಿಪಾದನೆ ಮಾಡಬಯಸಿದ್ದರು. ಆದರೆ, ಹಿಂದೂ ಧರ್ಮದ ಅನುಯಾಯಿಗಳಲ್ಲಿ ಮನುಸ್ಮೃತಿಯ ಮಹತ್ವವೇನು ಎಂಬುದೇ ಅಸ್ಪಷ್ಟ ಹಾಗೂ ವಿವಾದಿತ ವಿಷಯವಾದ್ದರಿಂದ, ಅದರಲ್ಲಿಯೂ ಮುಖ್ಯವಾಗಿ ಮನುಸ್ಮೃತಿಯನ್ನು ಹಿಂದೂ ಧರ್ಮಶಾಸ್ತ್ರಗಳಲ್ಲಿ ಒಂದಾಗಿ ಪರಿಗಣಿಸದೇ ಇದ್ದು, ಹಳ್ಳಿಗಾಡುಗಳಿಂದ ಹೊರಗೆ ಅದಕ್ಕೆ ಧಾರ್ಮಿಕ ಮಹತ್ವವೂ ಇಲ್ಲದಿದ್ದುದರಿಂದ, ಈ ಉದ್ದೇಶ ನೆರವೇರಿತೋ ಇಲ್ಲವೂ ಎಂಬುದು ಚರ್ಚಾಸ್ಪದ.
ಅಂಬೇಡ್ಕರ್ ರವರ ಪ್ರಮುಖ ಕೃತಿಗಳು
1)ಭಾರತದಲ್ಲಿ ಜಾತಿ ಪದ್ಧತಿ
2)ಸ್ವತಂತ್ರ ಕಾರ್ಮಿಕ ವರ್ಗದ ಸಂವಿಧಾನಾತ್ಮಕ ನಿಯಮ
3)ಕಾರ್ಮಿಕರು ಮತ್ತು ಸಂಸದೀಯ ಪ್ರಜಾಪ್ರಭುತ್ವ
4)ಬುದ್ಧ ಮತ್ತು ಅವನ ದಮ್ಮ
5)ಸಂಸದೀಯ ಪ್ರಜಾಪ್ರಭುತ್ವದ ಭವಿಷ್ಯ
6)ಪ್ರಜಾಪ್ರಭುತ್ವದ ಯಶಸ್ವಿ ಅಂಶಗಳು
7)ನನ್ನ ವೈಯಕ್ತಿಕ ತತ್ವಜ್ಞಾನ
8)ಬುದ್ಧಿಸಂ ಅಂಡ್ ಕಮ್ಯುನಿಸಂ

ಡಾ.ಬಿ.ಆರ್.ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕಲ್ಪನೆ.

ಡಾ.ಬಿ.ಆರ್.ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕಲ್ಪನೆ ಹೇಗಿತ್ತು ಮತ್ತು ಅದರಿಂದ ಅವರು ಏನನ್ನು ನಿರೀಕ್ಷಿಸಿದ್ದರು ಅನ್ನುವುದರ ಬಗ್ಗೆ ಈ ಉಲ್ಲೇಖವು ಬಹಳಷ್ಟು ತಿಳಿಸುತ್ತದೆ. ಕ್ರಾಂತಿಕಾರಕ ಬದಲಾವಣೆಗಳನ್ನು ಕೇವಲ ಕ್ರಾಂತಿಯ ಮೂಲಕವೇ ತರಬಲ್ಲೆವು ಮತ್ತು ಕ್ರಾಂತಿ ಎಂದರೆ ರಕ್ತಪಾತ ಅನ್ನುವುದು ಸಾಮಾನ್ಯ ತಿಳಿವಳಿಕೆ. ಅಲ್ಲದೆ ಕ್ರಾಂತಿಗಳು ಮತ್ತು ಪ್ರಜಾಪ್ರಭುತ್ವಗಳು ಪರಸ್ಪರ ಹೊಂದಣಿಕೆಯಾಗಲಾರವು ಎಂಬ ಗುಪ್ತ ಗುಮಾನಿಯೊ.
ಪ್ರಜಾಪ್ರಭುತ್ವವೆಂದರೆ ಸರ್ಕಾರದ ಒಂದು ರೂಪವೆಂದು ಅದು ಹುಟ್ಟಿದ ಪ್ರಾಚೀನತೆಯಿಂದ ಇಂದಿನ ಆಧುನಿಕತೆಯವರೆಗೂ ಕಲ್ಪಿಸಿಕೊಳ್ಳಲಾಗಿದೆ. ಆದರೆ ಪ್ರಜಾಪ್ರಭುತ್ವವು ಕೇವಲ ಸರ್ಕಾರದ ಒಂದು ರೂಪವಲ್ಲ. ಅದು ಪ್ರಮುಖವಾಗಿ ಸಹಬಾಳ್ವೆಯ ಸೊಗಸು ಮತ್ತು ಅನುಭವವನ್ನು ಪರಸ್ಪರ ದಟೈಸುವ ಒಂದು ಜೋಡಣಿ. ಮೂಲಭೂತವಾಗಿ ಅದು ಸಹವರ್ತಿಗಳೆಡೆಗೆ ತೋರುವ ಗೌರವಾದರ ಭಾವನೆ ಎಂದು ಹೇಳಿದ್ದಾರೆ.
ಅವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಪ್ರಜಾಸತ್ತಾತ್ಮಕ ಸಮಾಜವನ್ನು ನಿರೀಕ್ಷಿಸುತ್ತದೆ. ರಾಜಕಾರಣಿಗಳು ಪ್ರಜಾಪ್ರಭುತ್ವವು ಮೂಲಭೂತವಾಗಿ ಸಮಾಜದ ಒಂದು ಸ್ವರೂಪ ಕೇವಲ ಸರ್ಕಾರದ ಮಾದರಿ ಅಲ್ಲ ಅನ್ನುವುದನ್ನು ಗ್ರಹಿಸಲಿಲ್ಲ. ಇದು ಎರಡು ಅಂಶಗಳನ್ನು ಒಳಗೊಂಡಿದೆ. ಮೊದಲನೆಯದು ಒಂದು ಮನೋಭಾವ, ಸಹವರ್ತಿಗಳಿಗೆ ಗೌರವ ಮತ್ತು ಸಮಾನತೆ.
ಅಂಬೇಡ್ಕರ್ ಅವರ ಕೊನೆಯ ಸಂದೇಶ
ಏನೇ ಅಡೆತಡೆ ಬರಲಿ, ಅದರ ಮಾರ್ಗದಲ್ಲಿ ಎಂತಹದ್ದೇ ಏರುಪೇರುಗಳಾಗಲೀ, ತೊಂದರೆಗಳಾಗಲೀ ಆ ಹೋರಾಟದ ರಥ ಮುನ್ನಡೆಯಲೇ ಬೇಕು. ಅಕಸ್ಮಾತ್ ಈ ರಥವನ್ನು ನನ್ನ ಜನ ಮತ್ತು ನನ್ನ ಸಹಪಾಠಿಗಳು ಮುನ್ನಡೆಸಲು ಸಾಧ್ಯವಾಗದಿದ್ದರೆ ಈಗ ಅದು ಎಲ್ಲಿದೆಯೋ ಅದನ್ನು ಅಲ್ಲಿಯೇ ಇರಲು ಬಿಡಬೇಕು. ಯಾವುದೇ ಸಂದರ್ಭದಲ್ಲಿಯೂ, ಯಾವುದೇ ಕಾರಣಕ್ಕೂ ಅದನ್ನು ಹಿಂದೆ ಸರಿಯಲು ಬಿಡಬಾರದು ಜೈ ಬುದ್ಧ.

PGK

Post a Comment

Previous Post Next Post