*ನಿಧನ ವಾರ್ತೆ*
*ಸಾಮಾಜಿಕ ಕಾರ್ಯಕರ್ತ ಬಶೀರ್ ಶೇಖ್ ಇನ್ನಿಲ್ಲ*
ತನ್ನ ಪ್ರಮಾಣಿಕತನದ ಸಾಮಾಜ ಸೇವೆಗಳ ಮೂಲಕವೇ ಎಲ್ಲಾ ಸಮೂದಾಯದ ಜನರ ಪ್ರೀತಿಗೆ ಪಾತ್ರರಾಗಿದ್ದ ಶಿರಸಿ ಇಂದಿರಾ ನಗರದ ನಿವಾಸಿ ಬಶೀರ್ ಶೇಖ್ (57) ಇಂದು ಬೆಳಿಗ್ಗೆ ಮಂಗಳೂರಿನಲ್ಲಿ ನಿಧನರಾಗಿದ್ದಾರೆ.ಮೃತರು ಪತ್ನಿ ನಗರಸಭೆ ಮಾಜಿ ಸದಸ್ಯರಾದ ರಜೀಯಾ ಬಾನು,ಈರ್ವರು ಪುತ್ರರು,ಒರ್ವ ಪುತ್ರಿ,ಬಂಧು ಬಳಗದವರನ್ನು ಅಗಲಿದ್ದಾರೆ.ಶಿರಸಿ ತಾಲೂಕಾ ಮೈನಾರಾಟಿ ಎಜ್ಯುಕೇಶನ್ ಮತ್ತು ವೆಲಫೆರ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಯಾಗಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದ ಅವರು ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು.ಯುನಿಯನ್ ಪ್ರೌಢಶಾಲೆಯ ಸರ್ವಾಂಗೀಣ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರವಹಿಸಿರುವ ಬಶೀರ್ ಇವರು ಸರಕಾರಿ ಪದವಿ ಕಾಲೇಜಿನ ಆಡಳಿತ ಸಮಿತಿಯ ನಾಮನಿರ್ದೇಶಿತ ಸದಸ್ಯರಾಗಿಯೂ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದರು.ತಾವು ವಾಸಿಸುತ್ತಿದ್ದ ಇಂದಿರಾ ನಗರದ ಬಡಾವಣೆಯ ಸಮಸ್ಯ ಪರಿಹರಿಸುವ ನಿಟ್ಟಿನಲ್ಲಿ ಎಕಾಂಗಿಯಾಗಿ ಹೋರಾಟ ನಡೆಸಿ ನ್ಯಾಯಾಲಯದ ಮೆಟ್ಟಿಲನ್ನೂ ಎರಿದ್ದರು.ಹೋರಾಟದ ಮನೋಭಾವನೆ ಹೊಂದಿದ್ದ ಬಶೀರ್ ನಿಧನದಿಂದ ಇಂದಿರಾ ನಗರದಲ್ಲಿ ಸೂತಕದ ಛಾಯೆ ಆವರಿಸಿದಂತಾಗಿದೆ.